ನಂಜನಗೂಡು ನಗರವೂ ಶ್ರೀಕ್ಷೇತ್ರ ಶ್ರೀ ಶ್ರೀಕಂಠೇಶ್ವರ/ನಂಜುಂಡೇಶ್ವರ ದೊಡ್ಡ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದು, "ದಕ್ಷಿಣ ಕಾಶಿ" ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದೆ. ಈ ನಗರವು 31 ವಾರ್ಡುಗಳನ್ನೊಳಗೊಂಡಿದೆ.2011ರ ಜನಗಣತಿ ಪ್ರಕಾರ ಈ ನಗರದ ಜನಸಂಖ್ಯೆ 50598. ಜನಗೂಡು ತಾಲ್ಲೋಕಿನಲ್ಲಿ ಬೆಳೆಯುವ ಪ್ರಮುಖವಾದ ಬೆಳೆಗಳೆಂದರೆ ಭತ್ತ, ಕಬ್ಬು, ರಸಬಾಳೆ ಹಣ್ಣು, ಇದರಲ್ಲಿ ಬಾಳೆಹಣ್ಣು " ನಂಜನಗೂಡು ರಸಬಾಳೆ ಹಣ್ಣು " ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದೆ. ಇದು ವ್ಯವಸಾಯ ಮತ್ತು ಕೈಗಾರಿಕೋದ್ಯಮದ ನಗರವಾಗಿದೆ.

ಮೂಲ :  ನಂಜನಗೂಡು ನಗರಸಭೆ, ಕರ್ನಾಟಕ ಸರ್ಕಾರ.